ಜ್ಞಾನ ಜ್ಯೋತಿ ಬೆಳಗಿಸು ಅಂಧಕಾರವ ತೊಳಗಿಸು
ಒಂದು ದೀಪದಿಂದ ಇನ್ನೊಂದು ದೀಪವನ್ನು ಹೇಗೆ ಹಚ್ಚುತ್ತೇವೆಯೋ, ಹಾಗೇ ಭಗವಂತನು ತನ್ನ ಅನೇಕ ರೂಪಗಳನ್ನು ಸೃಷ್ಟಿ ಮಾಡುವನು.ಅವನ ಲೀಲೆಯ ಬಗೆಯನ್ನು ದೀಪ ಹಚ್ಚುವಾಗ ಮಾಡುತ್ತಾ
ದೀಪ ದಲ್ಲಿ ಇರುವ ಭಗವದ್ರೂಪವನ್ನು ಚಿಂತಿಸುತ್ತಾ ,ನಮಸ್ಕಾರ ಮಾಡುತ್ತಾ.ಮತ್ತು
ಅನಾದಿ ಕಾಲದಿಂದ ಬಂದ ಲಿಂಗ ದೇಹ ಎಂಬ ಕತ್ತಲೆಯನ್ನು ದೂರ* *ಓಡಿಸುವದು ಭಗವಂತನ
ದರ್ಶನವೆಂಬ ದೀಪ
ಅಂತಹ ಭಗವಂತನ ದರ್ಶನವಾಗುವುದು ಕೇವಲ ಗುರುಗಳ ಅನುಗ್ರಹದಿಂದ..
*ಜಡವಾದ ದೀಪಕ್ಕೂ, ಗುರ್ವನುಗ್ರಹ ಎಂಬ ದೀಪಕ್ಕೂ ಬಹಳ ವ್ಯತ್ಯಾಸವಿದೆ.
ಜಡವಾದ ದೀಪ ಎಣ್ಣೆ ಮುಗಿದ ಮೇಲೆ ಶಾಂತವಾಗುತ್ತದೆ.
ಆದರೆ ಗುರ್ವನುಗ್ರಹ ಎಂಬ ದೀಪ ಒಮ್ಮೆ ಹತ್ತಿದರೆ ಸಾಕು, ಮೋಕ್ಷ ದವರೆಗೆ ಶಾಂತ ವಾಗುವದಿಲ್ಲ.
ಶ್ರೀ ಹರಿ ವಾಯು ಗುರುಗಳ ಅನುಗ್ರಹ ಎಂಬ ದೀಪ ನಮ್ಮೆಲ್ಲರ ಜೀವನದಲ್ಲಿ ಬೆಳಗಲಿ ಎಂದು ಆಶಿಸುತ್ತಾ.
ಶ್ರೀ ಕೃಷ್ಣಾರ್ಪಣಮಸ್ತು
ನಿಮಗೆಲ್ಲಾ, ದೀಪಾವಳಿ ಹಬ್ಬದ ಶುಭಾಶಯಗಳು ಮತ್ತು ನಮಸ್ಕಾರ ಗಳು.
ಶ್ರೀ ಕೃಷ್ಣಾಯ ನಮಃ
0 ಕಾಮೆಂಟ್‌ಗಳು
Please Do not spam Here, Dont Post any Link Here.