ಹನುಮಂತನಿಗೆ ಯಾಕೆ ಕೇಸರಿ ಬಣ್ಣದ ಸಿಂಧೂರದಿಂದ ಪೂಜಿಸುತ್ತಾರೆ
ಅಯೋಧ್ಯದಲ್ಲಿ ಒಮ್ಮೆ ಆಂಜನೇಯಸ್ವಾಮಿ ದಿನನಿತ್ಯ ಕೆಲಸ ಮಾಡ್ತಾ ಮಾಡ್ತಾ ತುಂಬಾ ದಣಿದು ಹಸಿವಿನಿಂದ ಅಂತಃಪುರಕ್ಕೆ ಬಂದು ಅಲ್ಲೇ ಇರುವ ಸೀತಾ ಮಾತೆಯನ್ನು ತುಂಬಾ ಹಸಿವು ಆಗ್ತಾ ಇದೆ ತಿನ್ನುವುದಕ್ಕೆ ಊಟ ಬಡಿಸುವಂತೆ ಕೇಳ್ತಾನೆ .
ಅವಾಗಲೇ ಸ್ನಾನವನ್ನು ಮುಗಿಸಿಕೊಂಡು ಬಂದಂತಹ ಸೀತಾದೇವಿ ಹನುಮಾ ಸ್ವಲ್ಪತಾಳು ಮೊದಲು ನಾನು ಹಣೆಗೆ ಸಿಂಧೂರವನ್ನು ದರಿಸಿಕೊಂಡಮೇಲೆ ಆಮೇಲೆ ಊಟ ಬಡಿಸುತ್ತೇನೆ ಅಂತ ಹೇಳ್ತಾಳೆ ಸೀತಾದೇವಿ.
ಅವಾಗ ಆಂಜನೇಯ ಸ್ವಾಮಿ ಅಮ್ಮ ಹಣೆಗೆ ಸಿಂಧೂರವನ್ನು ದರಿಸುವುದು ಯಾಕೆ ಅಂತ ಪ್ರಶ್ನಿಸುತ್ತಾನೆ ? ಅದಕ್ಕೆ ಸೀತಾದೇವಿ ನಿಮ್ಮ ಪ್ರಭು ನೂರಾರು ವರ್ಷಗಳ ಯಾವಾಗಲೂ ಕಲ್ಯಾಣ ಪ್ರಧಾನವಾಗಿರಬೇಕು ಅದಕ್ಕೆ ಸಿಂಧೂರವನ್ನು ಹಂಚಿಕೊಳ್ಳುತ್ತಿದ್ದೇನೆ ಅಂತ ಹನುಮಂತನಿಗೆ ಹೇಳುತ್ತಾಳೆ .
ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ ಸೌಭಾಗ್ಯ ವೃದಿ ಅನುಗ್ರಹಿಸುತ್ತೆ ಇದನ್ನು ಧರಿಸಿದವಾರ ಪತಿಯರು ನೂರಾರು ವರ್ಷಗಳ ಕಾಲ ಆಯುರಾರೋಗ್ಯ ದಿಂದ ಕ್ಷೇಮವಾಗಿ ಇರುತ್ತಾರೆ ಅಂತ ಸೀತಾದೇವಿ ಹೇಳುತ್ತಾಳೆ .
ಸೀತಾದೇವಿ ಹೇಳಿದ ಮಾತನ್ನು ಕೇಳಿ ಆಂಜನೇಯಸ್ವಾಮಿ ಅಲ್ಲಿಂದ ಹೊರಗಡೆ ಹೋಗಿ ಸ್ವಲ್ಪ ಸಮಯದ ನಂತರ ಮತ್ತೆ ಬರ್ತಾನೆ. ದೇಹದ ತುಂಬಾ ಸಿಂಧೂರ ಬಣ್ಣವನ್ನು ಹಚ್ಚಿಕೊಂಡು ಸೀತಾದೇವಿ ಮುಂದೆ ಪ್ರತ್ಯಕ್ಷನಾಗುತ್ತಾನೆ ಇದನ್ನು ನೋಡಿದ ಸೀತಾದೇವಿ ಆಶ್ಚರ್ಯಪಟ್ಟು ಹನುಮಾನ್ ಏನಿದು ? ದೇಹದ ತುಂಬಾ ಸಿಂಧೂರವನ್ನು ಹಚ್ಚಿಕೊಂಡು ಬಂದಿದಿಯ ಅಂತ ಕೇಳುತ್ತಾಳೆ .
ಅದಕ್ಕೆ ಹನುಮ ತುಂಬಾ ವಿನಮ್ರತೆಯಿಂದ ಸಿಂಧೂರವನ್ನು ಧರಿಸಿದರೆ ಪ್ರಭುವು ನೂರಾರು ವರ್ಷಗಳ ಕಾಲ ಕಲ್ಯಾಣಪ್ರದ ಗಾಗಿ ಇರ್ತಾರೆ ಅಂತ ನೀವೇ ಹೇಳಿದ್ರಲ್ಲ ತಾಯಿ ಅಂತ ಉತ್ತರವನ್ನು ಕೊಡುತ್ತಾನೆ.
ನನ್ನ ಪ್ರಭು ಎಲ್ಲಕಾಲದಲ್ಲೂ ಕಲ್ಯಾಣಪ್ರದ ವಾಗಿರಬೇಕು ಅಂತ ಸಿಂಧೂರ ವನ್ನು ಹಚ್ಚಿಕೊಂಡಿದ್ದೇನೆ ಅಂತ ಹನುಮ ವಿನಮ್ರತೆಯಿಂದ ಉತ್ತರವನ್ನು ಕೊಡುತ್ತೇನೆ.
ಹನುಮಂತನ ಉತ್ತರ ಕೇಳಿದ ಸೀತ ದೇವಿಯ ಆನಂದಪರವಶ ವಾದ್ ನೇತ್ರದಿಂದ ತನ್ನ ಪ್ರಭು ಭಕ್ತಿಗೆ ಮೆಚ್ಚಿ ಸಂತೋಷ ದಿಂದ ಸೀತಾದೇವಿ ಹನುಮಂತ ನನ್ನ ಆಶೀರ್ವದಿಸುತ್ತಾಳೆ.
ಹನುಮಂತನ ಈ ಪ್ರಭು ಭಕ್ತಿಗೆ ಇದು ಬೆಟ್ಟದಂತ ಸಾಕ್ಷಿಯಾಗಿದೆ . ಈ ವಿಷಯವನ್ನು ತಿಳಿದು ಕೊಂಡ ಶ್ರೀ ರಾಮ ಚಂದ್ರ ಮಹಾ ಪ್ರಭು. ಭಕ್ತಿಗೆ ನೀನು ಉದಾಹರಣೆ ಯಾರು ನಿನ್ನನು ಸಿಂಧೂರದಿಂದ ಪೂಜಿಸುತ್ತಾರೋ ಅವರ ಕಷ್ಟಗಳಿಂದ ನಾನು ಕಾಪಾಡುತ್ತೇನೆ
ಅಂತ ಹೇಳ್ತಾನೆ ಅದಕ್ಕೆ ಆಂಜನೇಯಸ್ವಾಮಿಯ ಪೂಜೆಗೆ ಸಿಂಧೂರವನ್ನು ಹೆಚ್ಚಾಗಿ ಬಳಸುತ್ತಾರೆ.
ಸ್ನೇಹಿತರೆ ಇದಿಷ್ಟು ಇವತ್ತಿನ ವಿಶೇಷವಾದ ಮಾಹಿತಿ ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ ಮತ್ತೊಂದು ಆಸಕ್ತಿಕರವಾದ ಮಾಹಿತಿ ಜೊತೆ ಸಿಕ್ತೀನಿ ಅಲ್ಲಿವರೆಗೂ ನಮಸ್ಕಾರ
0 ಕಾಮೆಂಟ್‌ಗಳು
Please Do not spam Here, Dont Post any Link Here.