ಪರಮಶಿವನನ್ನು ಆರಾಧಿಸಲು ಪೂಜಿಸಲು ಅದ್ಭುತವಾದ ಪರಿಣಾಮಕಾರಿ ಸುಲಭ ಮಂತ್ರಗಳ ಬಗ್ಗೆ ಇವತ್ತಿನ ವಿಡಿಯೋದಲ್ಲಿ ತಿಳಿಯೋಣ ಬನ್ನಿ ಹಾಗೂ ಈ ಮಂತ್ರವನ್ನು ಜಪಿಸುವುದರಿಂದ ಬರುವ ಲಾಭಗಳೇನು  ಅದರಿಂದ ನಮ್ಮ ಮೇಲೆ ಬೀಳುವ ಪರಿಣಾಮವೇನು ಅನ್ನುವ ವಿಷಯದ ಬಗ್ಗೆ ತಿಳಿಯೋಣ ಬನ್ನಿ.



ಸ್ನೇಹಿತರೆ ದೇವರುಗಳಲ್ಲಿ  ಪರಮ  ಶಿವನನ್ನು ಮನಃಸ್ಪೂರ್ತಿಯಾಗಿ ಆರಾಧಿಸಿದರೆ ಬೇಗ ಒಲಿದು ಬಿಡುತ್ತಾನೆ ಮತ್ತು ಬೇಡಿದ ವರವನ್ನು ಕರುಣಿಸುತ್ತಾನೆ ಎಂಬುದು ಅಚಲವಾಗಿರುವ ನಂಬಿಕೆ. ಶಿವನ ಆರಾಧನೆಯಿಂದ‌ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ಶಿವನ ಆರಾಧನೆಗೆ ಹಲವು ಮಂತ್ರಗಳಿವೆ. ಅದರಲ್ಲಿ  ಸುಲಭವಾಗಿರುವ ಕೆಲವು ಮಂತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ. 


 ಮೊದಲನೆಯದಾಗಿ ಶಿವ ಪಂಚಾಕ್ಷರಿ ಮಂತ್ರ  - ಓಂ ನಮಃ ಶಿವಾಯ


ಇದರ ಅರ್ಥ- ನಾನು ಶಿವನಿಗೆ ನಮಸ್ಕರಿಸುತ್ತೇನೆ‌


ಓಂ ನಮಃ ಶಿವಾಯ" ದ ಅರ್ಥವೇನೆಂದರೆ ಶಿವನಿಗೆ ನಾನು ನಮಸ್ಕರಿಸುತ್ತಿದ್ದೇನೆ. ಶಿವ ಇಲ್ಲಿ ಸರ್ವೋಚ್ಛ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಶಿವ ಇಲ್ಲಿ ಆಂತರಿಕ ಆತ್ಮ. ಈ ಮಂತ್ರವನ್ನು ಪಠಿಸುವುದರಿಂದಾಗಿ ನೀವು ನಿಮ್ಮ ಅಂತರಾತ್ಮವನ್ನು ಕರೆಯುತ್ತೀರಿ, ಭಜಿಸುತ್ತೀರಿ. ಸುರಕ್ಷತೆ ಮತ್ತು ರಕ್ಷಣೆಯನ್ನು ಬಯಸುತ್ತಿರುವವರಿಗಾಗಿ ಶಿವ ಪಂಚಾಕ್ಷರಿ ಮಂತ್ರ ಬಹಳ ಒಳ್ಳೆಯದು. ನಿಮ್ಮೊಳಗಿನ ಶಕ್ತಿಯನ್ನು ಇದು ಅಭಿವೃದ್ಧಿ ಪಡಿಸುತ್ತದೆ ಮತ್ತು ಜೀವನವನ್ನು ಧನಾತ್ಮಕ ಶಕ್ತಿಯಿಂದ ಭರ್ತಿ ಮಾಡುತ್ತದೆ. ಈ ಮಂತ್ರವನ್ನು ಪ್ರತಿಯೊಬ್ಬರೂ ಹೇಳಬಹುದು ಮತ್ತು ಇದಕ್ಕೆ ಯಾವುದೇ ನಿಯಮಗಳಿಲ್ಲ. ನೀವಿದನ್ನು ಎಲ್ಲಿ ಬೇಕಿದ್ದರೂ ಯಾವಾಗ ಬೇಕಿದ್ದರೂ ಪುನರಾವರ್ತಿಸುತ್ತಾ ಇರಬಹುದು.


ಎರಡನೆಯದು ಮಹಾಮೃತ್ಯುಂಜಯ ಮಂತ್ರ -  *ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ | ಊರ್ವಾರುಕಮಿವಾ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್ ||


ಶಿವನ ಬಹಳ ಶಕ್ತಿಶಾಲಿ ಮಂತ್ರ ಎಂದು ಮೃತ್ಯುಂಜಯ ಮಂತ್ರಕ್ಕೆ ಹೇಳಲಾಗುತ್ತದೆ. ಓಂ ನಮಃ ಶಿವಾಯವನ್ನು ನೀವು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಹೇಳಬಹುದು. ಆದರೆ, ಈ ಮೃತ್ಯುಂಜಯ ಮಂತ್ರಕ್ಕೆ ಕೆಲವು ನಿಯಮಗಳಿವೆ. ಈ ಮಂತ್ರವನ್ನು ಯಾವಾಗ ಮತ್ತು ಹೇಗೆ ಹೇಳಬೇಕು ಎಂಬುದನ್ನು ನೀವು ಅರಿತಿರಬೇಕಾದ ಅಗತ್ಯತೆ‌ ಇದೆ. ಈ ಮಂತ್ರವನ್ನು ಹೇಳುವುದರಿಂದಾಗಿ ನಿಮ್ಮ ಜೀವನಕ್ಕೆ ಶಕ್ತಿ ಮತ್ತು ಇತರೆ ಕೆಲವು ಪ್ರಮುಖರಲ್ಲಿ ಲಾಭಗಳಾಗುತ್ತದೆ. ಸಂಸ್ಕ್ರತ ಶಬ್ದವಾಗಿರುವ ಮೃತ್ಯುಂಜಯ ಎಂದರೆ ಸಾವನ್ನು ಗೆಲ್ಲುವವನು ಎಂದರ್ಥ. ನಿಮ್ಮ ಸಾವಿನ ಬಗ್ಗೆ ನಿಮಗಿರುವ ಭಯವನ್ನು ಹೋಗಲಾಡಿಸಿಕೊಳ್ಳಲು ಮತ್ತು ಆ ನಿಟ್ಟಿನಲ್ಲಿ ನೀವು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿರುವಾಗ ಈ ಮಂತ್ರವನ್ನು ಪಠಿಸುವುದು ಒಳ್ಳೆಯದು.


ಸ್ನೇಹಿತರೆ ಮೂರನೆಯದಾಗಿ ರುದ್ರ ಮಂತ್ರ   ಓಂ ನಮೋ ಭಗವತೇ ರುದ್ರಾಯ


ಈ ರುದ್ರ ಮಂತ್ರವು ಶಿವನನ್ನು ತಲುಪಲು ಇರುವ ಹತ್ತಿರದ ಮಾರ್ಗ ಎಂದು ಹೇಳಬಹುದು. ಮಹಾಶಿವನಿಂದ ಆಶೀರ್ವಾದ ಪಡೆಯುವುದಕ್ಕಾಗಿ ಈ ಮಂತ್ರವನ್ನು ಬಳಸಲಾಗುತ್ತದೆ .ಶಿವನಿಂದ ನಿಮ್ಮ ಇಷ್ಟಾರ್ಥ ಸಿದ್ಧಿಸುವುದಕ್ಕಾಗಿ ಈ ಮಂತ್ರ ಪಠಣೆ ಮಾಡಬಹುದು.


ನಾಲ್ಕನೆಯದು ಶಿವ ಗಾಯಿತ್ರಿ ಮಂತ್ರ -  ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹೀ ತನ್ನೋ ರುದ್ರಃ ಪ್ರಚೋದಯಾತ್


ಹಿಂದೂ ಮಂತ್ರಗಳಲ್ಲಿ ಗಾಯತ್ರೀ ಮಂತ್ರವು ಅತ್ಯಂತ ಶಕ್ತಿಶಾಲಿಯಾಗಿರುವ ಮಂತ್ರ ಎಂಬುದು ಎಲ್ಲರಿಗೂ ತಿಳಿದಿದೆ. ಅದರಲ್ಲಿ ಇದು ಶಿವ ಗಾಯತ್ರೀ ಮಂತ್ರ. ನಿಮ್ಮ ಮನಃಶಾಂತಿಮನ್ನು ನೀವು ಬಯಸುತ್ತಿದ್ದರೆ ಮತ್ತು ಶಿವನನ್ನು ಭಜಿಸಬೇಕು ಎಂದು ಅಂದುಕೊಳ್ಳುತ್ತಿದ್ದರೆ ಈ ಮಂತ್ರವನ್ನು ಹೇಳಬಹುದು. ‌      ‌        ‌