ಹನುಮಂತನು ಕಾರ್ಯಸಾಧಕನು, ಭಕ್ತಿಯಿಂದ ಹನುಮಂತನ್ನು ಆರಾಧನೆ ಮಾಡುವವರಿಗೆ ಅವರ ಕೋರಿಕೆಗಳು ಖಂಡಿತವಾಗಿ ನೆರವೇರಿತ್ತವೆ. ಭಕ್ತರ ಕೋರಿಕೆಯನ್ನು ಅನುಸರಿಸಿ ಆಂಜನೇಯ ಸ್ವಾಮಿಯ ಶ್ಲೋಕಗಳನ್ನು ಭಕ್ತಿಯಿಂದ ಪಠಿಸುವುದರಿಂದ ತಮ್ಮ ತಮ್ಮ ಕಾರ್ಯ ಸಿದ್ಧಿಯನ್ನು ಸಾಧಿಸಬಹುದು
1.ವಿದ್ಯಾ ಪ್ರಾಪ್ತಿಗೆ
ಪೂಜ್ಯಾಯ ವಾಯುಪುತ್ರಾಯ ವಾಗ್ದೋಷ ವಿನಾಶನ |
ಸಕಲ ವಿದ್ಯಾಂಕುರಮೇ ದೇವ ರಾಮದೂತ ನಮೋಸ್ತುತೆ ||
2. ಉದೋಗ ಪ್ರಾಪ್ತಿಗೆ
ಹನುಮಾನ್ ಸರ್ವಧರ್ಮಜ್ಞ ಸರ್ವಾ ಪೀಡಾ ವಿನಾಶಿನೇ |
ಉದ್ಯೋಗ ಪ್ರಾಪ್ತ ಸಿದ್ಧ್ಯರ್ಥಂ ಶಿವರೂಪಾ ನಮೋಸ್ತುತೇ ||
3.ಕಾರ್ಯ ಸಾಧನೆಗೆ
ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ |
ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ ||
4.ಗ್ರಹದೋಷ ನಿವಾರಣೆ
ಮರ್ಕಟೇಶ ಮಹೋತ್ಸಹಃ ನವಗ್ರಹ ದೋಷ ನಿವಾರಣಃ |
ಶತ್ರೂನ್ ಸಂಹಾರ ಮಾಂ ರಕ್ಷ ಶ್ರಿಯಂ ದಾಪಯಾ ದೇಹಿಮೇ ಪ್ರಭೋ ||
5. :- ಆರೋಗ್ಯಮುನಕು
ಆಯುಃ ಪ್ರಜ್ಞ ಯಶೋ ಲಕ್ಷ್ಮೀ ಶ್ರದ್ಧಾ ಪುತ್ರಾಸ್ಸುಶೀಲತಾ |
ಆರೋಗ್ಯಂ ದೇಹ ಸೌಖ್ಯಾಂಚ ಕಪಿನಾಥ ನಮೋಸ್ತುತೇ ||
6. ಸಂತಾನ ಪ್ರಾಪ್ತಿಗೆ
ಪೂಜ್ಯಾಯ ಅಂಜನೇಯ ಗರ್ಭದೋಷಾಪಹಾರಿತೋ |
ಸಂತಾನಂ ಕುರುಮೇ ದೇವ ರಾಮದೂತ ನಮೋಸ್ತುತೇ ||
7.ವ್ಯಾಪಾರಾಭಿವೃದ್ಧಿಗೆ
ಸರ್ವ ಕಲ್ಯಾಣ ದಾತಾರಮ್ ಸರ್ವಾಪತ್ ನಿವಾರಕಮಂ|
ಅಪಾರ ಕರುಣಾಮೂರ್ತಿಂ ಆಂಜನೇಯಂ ಸಮಾಮ್ಯಹಂ ||
8.ವಿವಾಹ ಪ್ರಾಪ್ತಿಗೆ
ಯೋಗಿ ಧ್ಯೇ ಯಾಂ ಘ್ರೀ ಪದ್ಮಾಯ ಜಗತಾಂ ಪತಯೇ ನಮಃ |
ವಿವಾಹಂ ಕುರುಮೇದೇವ ರಾಮದೂತ ನಮೋಸ್ತುತೇ ||
ಈ ಶ್ಲೋಕಗಳನ್ನು ಆಯಾ ಕಾರ್ಯಸಿದ್ಧಿಗೆ ಅನುಗುಣವಾಗಿ ಕೋರಿಗೆಗಳು ಇರುವವರು 48 ದಿನಗಳು ನಿಷ್ಟೆಯಿಂದ್ ಪಠನೆ ಮಾಡಿದರೆ ಅಥವಾ ಪ್ರತಿ ದಿನವೂ ಆಂಜನೇಯ ಸ್ವಾಮಿ ಗುಡಿಗೆ ಹೋಗಿ ಶಕ್ತಿಯಷ್ಟು ಪ್ರದಕ್ಷಿಣೆಯ ಸಂಖ್ಯಾ ನಿಯಮವನ್ನು ಅನುಸರಿಸಿ ಪ್ರದಕ್ಷೆಗಳನ್ನು ಹಾಕಿ ಜಪ ಸಂಖ್ಯೆಯಷ್ಟು ಜಪವನ್ನು ಶಕ್ತಿಗನುಸಾರ ಮಾಡಿ ಹನುಮಂತನ ಪೂಜೆಯನ್ನು ಮಾಡಿದರೆ ಕಾರ್ಯಸಿದ್ಧಿಯಾಗುತ್ತದೆ.
0 ಕಾಮೆಂಟ್ಗಳು
Please Do not spam Here, Dont Post any Link Here.